Sunday, July 13, 2008

ಮಾವಿನ ಮರದ ನೆನಪಿನಲಿ

ಮಾವಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ . ಹಣ್ಣುಗಳ ರಾಜ ಎಂದು ಸ್ಕೂಲ್ ನಲ್ಲಿ ಟೀಚರ್ ಹೇಳಿದ ನೆನಪು .ಸರಿ officeನಿಂದ ಬಸ್ನಲ್ಲಿ ಬರುತ್ತಾ 20ರೂ. ಎಂಬ Boardನೋಡಿ ನನ್ನ ನೆನಪುಗಳು ಹಾಗೆ ReverseGearಗೆ ಬಿತ್ತು.ನನ್ನ ಬಾಲ್ಯದಲ್ಲಿ ದಸರ ರಜ ಮತ್ತು ಬೇಸಿಗೆ ರಜ ಎಲ್ಲ ಕಳೆದದ್ದು ನನ್ನ ಹುಟ್ಟಿದ ಊರು..ನನ್ನ ಹಳ್ಳಿಯಲ್ಲಿ. ಬದುಕು ಮತ್ತು ಗ್ರಾಮೀಣ ಬದುಕು ಅಲ್ಲೆ ಸಿಕ್ಕಿದ್ದು ಅಂತ ಕೆಲವೊಮ್ಮೆ ಅನ್ನಿಸುತ್ತೆ.ನೆನಪಿನ ಬುತ್ತಿಯನ್ನು ಬೆಂಗಳೂರು Busy ಜೀವನದ್ದಲ್ಲಿ ಬಿಚ್ಚಿದ್ದು ಮಾವಿನ ಹಣ್ಣು. ನನ್ನ ಬಾಲ್ಯದದಿನಗಳು ನನ್ನ ಅಣ್ಣಂದಿರ ಜೊತೆ ನಿತ್ಯವೂ ಈಜಾಡಲು ಕಾರ್ಯಕ್ರಮ ಇದ್ದೇಇತ್ತು.

ಬೇಸಿಗೆ ಬೇರೆ ಆಗಿದ್ದರಿಂದ ಆ ಬಿಸಿಲಿನಲ್ಲಿ ಈಜಾಡಲು ಇನ್ನು ಮಜ .ಆ ಮಜ ತಪ್ಪಿಸಿಕೊಳ್ಳಬಾರದೆಂದು ಮನೆಯವರ ಕಣ್ಣು ತಪ್ಪಿಸಿ ಕಳ್ಳನ ತರ ಹೊಗುತ್ತಿದ್ದೆವು.ಈಜಲು ಹೋಗುವ ದಾರಿಯಲ್ಲಿ ಒಂದು ಮಾವಿನ ಮರ ಇತ್ತು.ಹಳ್ಳಿಯಲ್ಲಿ ವಿಶೇಷ ನಾಮದಿಂದ ಕರೆಯುವಂತೆ ಆ ಮರದ ಹೆಸರು ಕಾಳ್ಳಜ್ಜಿ ಮಾವಿನ ಮರ.ಆ ಮರದ ಹತ್ತಿರ ಬಂದರೆ ಊರ ಹತ್ತಿರ ಇದ್ದೆವಿ ಎಂದು ನಮ್ಮ ಅಣ್ಣದಿಂರು ಹೇಳುತಿದ್ದ ನೆನಪು. ಊರ ಹತ್ತಿರದ ಮರವಾದ್ದರಿಂದ ಊರವರ ಕಣ್ಣು ಆ ಮರದ ಮೇಲಿನ ಹಣ್ಣುಗಳ ಮೇಲೆ ಇತ್ತು.ಊರವರ ಕಣ್ಣು ಬಿದ್ದಿದೆ ಅಂದರೆ ನಮ್ಮಕಣ್ಣು ಬಿದ್ದಿರುವುದು ವಿಶೇಷ ಏನಲ್ಲ. ಆ ಮರದ ಹಣ್ಣುಗಳನ್ನು ಕೀಳಲು ಒಂದು ಮುಹೂರ್ತ ನಿಗದಿ ಮಾಡಿದೆವು. ಮಹೂರ್ತವೇನೊ ಒಳ್ಳೆಯದೆ , ಆದರೆ ಒಳ್ಳೆಯ ಮಹೂರ್ತಗಳೆಗೂ ಕಂಟಕಗಳಿರುವಂತೆ ಆ ಮರವನ್ನು ಊರ ಸಾಬರಿಗೆ ಗುತ್ತಿಗೆ ಕೊಟ್ಟಿದ್ದರು. ನಾನು ಚಿಕ್ಕವನಾದ್ದರಿಂದ ಮರದ ಕೆಳಗೆ ನಮ್ಮ ಅಣ್ಣ ಹಾಕುವ ಕಾಯನ್ನು Catchಹಿಡಿಯುವ ಕೆಲಸ .ಆ ಕೆಲಸದ ಜೊತೆ ನಾನು ನನ್ನ ಹೊಸ ಹವಾಯಿ ಚಪ್ಪಲಿ ಬೇರೆ ಹಾಕಿ ಹೋಗಿದ್ದೆ.ಮರದ ಮೇಲೆ ಹಣ್ಣನ್ನು ಮತ್ತು ಕೆಳಗೆ ನನ್ನ ಹೊಸ ಚಪ್ಪಲಿಯನ್ನು ನೋಡುವ ಕೆಲಸ.ಸುಮಾರು ಒಂದು ಮೂರು-ನಾಲ್ಕು ಹಣ್ಣು ಕೀತ್ತಿರಬಹುದು ನನ್ನ ಅಣ್ಣ ಮರದಿಂದ ಹಾರಿ "ಎಲ್ಲ ಓಡ್ರಲೆ ಸಾಬ್ರು ಬರ್ತವ್ರೆ "ಎಂದು ಅಲ್ಲಿಂದ ಎಲ್ಲಾರು ಓಡಿದರು.ಆ ಸಾಬರವನು ನನ್ನ ಕುತ್ತಿಗೆಗೆ ಕೈ ಹಾಕಬೇಕು ಅನ್ನುವಷ್ಟರಲ್ಲಿ ನಾನು ಪರಾರಿ.

ಆದ್ರೆ ದುಃಖಕ್ಕೆ ಕಾರಣವಾಗಿದ್ದು ಓದುವ ಭರದಲ್ಲಿ ನನ್ನ ಹೊಸ ಚಪ್ಪಲಿಯನ್ನು ಅಲ್ಲೇ ಬಿಟ್ಟು ಓದಿದ್ದು. ನನ್ನ ಅಣ್ಣಂದಿರಿಗೆ ತಪ್ಪಿಸಿಕೊಂಡದ್ದಕ್ಕೆ ಸಂತೋಷ , ನನಗೆ ನನ್ನ ಹೊಸ ಚಪ್ಪ್ಲಿ ಹೋಗಿದ್ದಕ್ಕೆ ದುಃಖ. ಹಿಂತಿರುಗಿ ತರುವಂತಿಲ್ಲ, ಮನೆಯಲ್ಲಿ ಕೇಳುವಂತಿಲ್ಲ. ಕೇಳಿದರೆ ನಮ್ಮ ಈಜಾಡುವ ಕೆಲಸಕೆ ಕತ್ತ್ರಿ ,ಅದೂ ..ಅಲ್ಲದೆ ಬೇರೆಯವರ ಮಾವಿನ ಮರ ಹತ್ತಿದ್ದಕೆ ಬೇರೆ ವದೆ ಬೀಳುವ ಭಯ. ನನ್ನ ದುಃಖಕ್ಕೆ ಮೊದಲ ಕಾರಣ ಆಗ ನಮಗೆ ಚಪ್ಪಲಿ ಹಾಕಿದರೇನೆ ದೊಡ್ಡ ಸಂಭ್ರಮ. ನನ್ನ ಹಳ್ಳಿಯಲ್ಲಿ ಚಪ್ಪಲಿ ಹಾಕದ ತುಂಬ ಹುಡಗರು. ಅವರ ಜೊತೆ ಚಪಲ್ಲಿ ಹಾಕುವನು ನಾನೆ. ಅದ್ದರಿಂದ ನನಗೆ ವಿಷೇಶ ಸ್ಥಾನವೆಂದು ನಾನು ಬಾವಿಸಿದ್ದೆ .ಚಪ್ಪಲಿ ಹೋದಾಗಿನಿಂದ ಮಂತ್ರಿ ಪಟ್ಟ ಹೋದ ಶಾಸಕನ ಥರ ನನ್ನ ಚಡಪದಿಕೆ ಮುಂದುವರೆದಿತ್ತು. ಯಾರ ಮನೆಗೆ ಹೋದರು ಯಾರ ಕಾಲನ್ನು ನೋಡಿದರು ನನ್ನ ಚಪ್ಪ್ಲಿ ಇರಬಹುದೆ ಎಂಬ ಗುಮಾನಿ. ನಂತರ ನಾನು ಕೂಡ ಹುಡುಗರ ಜೊತೆ ಬರಿಕಾಲಿನಲ್ಲಿ ನನ್ನ ಬೇಸಿಗೆ ರಜ ಕಳೆದು ಅಯ್ತು. ನಂತರದ ಬೇಸಿಗೆ ರಜದಲ್ಲಿ ಅದೆ ಅಭ್ಯಾಸವಾಯಿತು. ಈ ನೆನಪು ಬಿಚ್ಚಿದ್ದು ಮಾವಿನ ಹಣ್ಣು ನೋಡಿದಾಗ ಮತ್ತು ಈಗ ನಾನು Brand ಎಂದು ಹಾಕಿರುವ ದುಬಾರಿ ಚಪ್ಪಲಿಯನ್ನು ನೊಡಿದಾಗ. ಮಾವಿನ ಹಣ್ಣು ಅತ್ತಂತೆ ಮತ್ತು ಈಗಿನ ದುಬಾರಿ ಬೆಲೆಯ ಚಪ್ಪ್ಲಿ ನನ್ನ ನೋಡಿ ನಕ್ಕಂತೆ ಭಾಸವಾಯ್ತು.

3 comments:

Unknown said...

Nevu maduthiruva hosa prayatnakke shubhavagali......nimma e blog kannadigara mane mathagali.........

Hari Prasad C M

ವಿ.ರಾ.ಹೆ. said...

ಬ್ಲಾಗ್ ಲೋಕಕ್ಕೆ ಸ್ವಾಗತ.

ಹೌದು,ಬಾಲ್ಯದ ನೆನಪುಗಳು ಯಾವತ್ತೂ ಅಮರ ಮಧುರ.
ಮಾವಿನ ಮರದ ನೆನಪಿನೊಂದಿಗೆ ಬಂದ ಈ ಬ್ಲಾಗ್ ಮುಂದೆ ಒಳ್ಳೊಳ್ಳೆಯ ಬರಹಗಳನ್ನು, ಮಾಹಿತಿಗಳನ್ನು ಹೊತ್ತು ಬರಲಿ ಎಂದು ಆಶಿಸುತ್ತೇನೆ. all d best :)

ಹ್ಮ್... "ಬೆಳಕ ಹೊಂಬಾಳೆ" ಅಂದ್ರೇನು?


-ವಿಕಾಸ್ ಹೆಗಡೆ
http://vikasavada.blogspot.com/

Niranjan said...

Hi hegde ಹೊಂಬಾಳೆ ಅಂದ್ರೆ ..ತೆಂಗು ಅಡಿಕೆ ಗಳ ಹೂವು .ಅದು ಶುಭ ಸೂಚನೆ ಅಂತ ದೊಡ್ಡವರ ನಂಬಿಕೆ. ಅದನ್ನು ನಾನು ಬೆಳಕಿನ ಜೊತೆ ಮಿಕ್ಸ್ ಮಾಡಿದಿನಿ .
Nothing spl...